ಇಂದೇಕೆ? ಅಂದೇ ಹೇಳಬೇಕಿತ್ತು ಎಂದೆಯಾ ತಂದೆಕುಂಭ ಹಿಡಿದು ಮುಕಾಂಬೆಯಾಗಿ ಇರು ಎಂದಿರಿಬಿರುಬಿಸಿಲಲೂ ಬರಿಗಾಲಲಿ ನಡೆ ಎಂದು ರಥವೇರಿದಿರಿಹೇಳುವುದಾದರೂ ಹೇಗೆ? ಭೋಪರಾಕಿನ ಹೊರತು ಏನೂ ಕೇಳುವುದಿಲ್ಲ ನಿಮಗೆಇಂದೇಕೆ, ಅಂದೇ ಹೇಳಬೇಕಿತ್ತು ಎಂದೆಯಾ ತಂದೆಹುಶಾರ್, ಬಂದೀರಿ, ಪಟ್ಟಗತ್ತಿಗಳು ಕಾದಿವೆ ಎಂದಿರಿಮೊಲೆಯೋನಿಗಳು ಸ್ರವಿಸುತಿವೆ ಗಿರಿಯನೇರಬೇಡ ಎಂದಿರಿಕಠುವಾದ ದೇವತೆ ಕಣ್ಮುಚ್ಚಿ ಕಲ್ಲಾಗಿರುವಾಗಇಗರ್ಜಿಯ ಗೋಡೆ ಕಲ್ಲುಗಳೂ ನನ್ನ ಹೊರಲು ಶಿಲುಬೆಯಾಗಿರುವಾಗಅರಗಿನರಮನೆಯೇ ಸಿಂಗಾರೆವ್ವನ ಸುಟ್ಟು ಬೂದಿ ಮಾಡಿರುವಾಗಹೇಳುವುದಾದರೂ ಹೇಗೆ?
ಬೆಂಕಿ ಬೆಳಕು ಫರಕು ತಿಳಿಯಲಿಲ್ಲ ನಮಗೆಕೈದೀಪ ಕಿಚ್ಚಾಗಿ ಸುಡುವುದೆಂದರಿವಾಗಲಿಲ್ಲ ನಮಗೆಕೆಂಪು ನಿಮ್ಮದು ಹಳದಿ ನಿಮ್ಮದು
ಕೆಂಪು ಹಳದಿ ಬಣ್ಣ ಬಾವುಟಗಳೆಲ್ಲ ನಿಮದುಕೆಂಪು ನಿಮ್ಮದು ಹಳದಿ ನಿಮ್ಮದು
ಕೆಂಪು ಹಳದಿ ಪೇಟ, ಶಾಲು, ತುರಾಯಿಗಳೆಲ್ಲ ನಿಮದುನೆಲ ನಮ್ಮದಲ್ಲ ನಾವು ನೆಲದವರುಗಡಿ ನಮಗಿಲ್ಲ ನಾವು ನುಡಿಯವರುತೇರು ನಮದಲ್ಲ ನಾವು ಕನ್ನಡಮ್ಮನ ಒಕ್ಕಲುಕಿತ್ತೂರಿನ ಕತ್ತಿ ಕಿತ್ತಿರಿ ದುರ್ಗದ ಒನಕೆ ಒಗೆದಿರಿಬೆಳವಡಿಯ ಪತಾಕೆ ಸುಟ್ಟಿರಿಇಂದೇಕೆ? ಅಂದೇ ಹೇಳಬೇಕಿತ್ತು ಎಂದರೆಹೇಳುವುದಾದರೂ ಹೇಗೆ? ಎದೆ ನೆಲದ ಭಾಷೆ ತಿಳಿಯುವುದೇ ಇಲ್ಲ ನಿಮಗೆಅದೆಷ್ಟು ಹೆಣ್ಣುಗಳ ನೆತ್ತರ ಕುಡಿದಿದೆಯೋ ಈ ನೆಲದಾಸವಾಳ ಇನ್ನೆಲ್ಲೂ ಇಲ್ಲದಷ್ಟು ಕೆಂಪಾಗಿ ಅರಳಿದೆ..ಇಂದೇಕೆ? ಅಂದೆ ಕೊಡಿಸಬಹುದಿತ್ತು ನ್ಯಾಯ ಎಂದೆಯಾ ತಂದೆನ್ಯಾಯವೆಂದರೆ ಎದುರಿರುವವರ ಶಿಕ್ಷಿಸುವುದೆ?ಮಾಗಿ ಋತು ಕರುಣದ ಕೊನೆ ಹನಿಗಳನುದುರಿಸಿದೆಮೆಟ್ಟುವವರೆದುರೇ ತಲೆಯೆತ್ತಿ ಬೆಳೆಯುವೆವು ಗರುಕೆಯಂತೆಬಾಬಾ ಇದ್ದಾರೆ ನಮಗೆ ಬಾಪು ಇದ್ದಾರೆ ನಮಗೆಸಾವಿತ್ರಿ ಇದ್ದಾಳೆ ನಮಗೆ ಕರುಣದ ಗುರು ಇದ್ದಾನೆ ನಮಗೆಮಾತು ಕಸಿದೀರಿ ಮೌನ ಕಸಿಯಬಹುದೆಹಾಡು ನಿಲಿಸೀರಿ ಎದೆಗವಿತೆ ಅಳಿಸಬಹುದೆದೀಪ ಕಸಿದೀರಿ ಬೆಳಕು ತಡೆಯಬಹುದೆಬರೆಯಲಿದ್ದೇವೆ ಪ್ರೀತಿ ಚಿತ್ತಾರ ಖಾಲಿ ಕುಂಭಗಳ ಮೇಲೆತುಂಬಲಿದ್ದೇವೆ ಕುಂಭ ಹೊತ್ತ ಅಕ್ಕಂದಿರೆದೆಗಳಲಿ ದಿಟದ ದಿಟ್ಟ ಕವಿತೆಯಾರೆಂದವರು ಮರ ಅಚಲವೆಂದು?ಅದು ನಿಂತಲ್ಲೆ ಪ್ರತಿಕ್ಷಣ ನಡೆಯುವುದು..ಕೈಗೆಕೈ ಜೋಡಿಸಿ ಮೆರವಣಿಗೆ ಹೊರಡಲಿದ್ದೇವೆ ತಂದೆಬಣ್ಣ ಬಾವುಟ ಪೇಟ ಹಾರ ತುರಾಯಿಗಳೆಲ್ಲ ಇರಲಿ ನಿಮಗೆನಾವು, ಈ ನೆಲದ ಹೆಣ್ಣುಗಳು, ಅದೋ ನೋಡಿ,ಕೈಗೆಕೈ ಜೋಡಿಸಿ ಮೆರವಣಿಗೆ ಹೊರಟಿದ್ದೇವೆಧನ್ಯವಾದ ನಿಮಗೆ ಕೊಟ್ಟಿರುವ ಎಳ್ಳುಕಾಳಿಗೆ, ಕಸಿದುಕೊಂಡ ಕುಂಬಳಕ್ಕೆಧನ್ಯವಾದ ನಿಮಗೆ, ನಮ್ಮ ದಾರಿ ನಮಗೆ ತೋರಿಸಿದ್ದಕ್ಕೆ..ಧನ್ಯವಾದ ನಿಮಗೆ, ನಮ್ಮ ದಾರಿಯೇನೆಂದು ನಮಗೆ ನೆನಪಿಸಿದ್ದಕ್ಕೆ..
(ವರ್ಣ ಚಿತ್ರ ಕೃಪೆ - ಅಂತರ್ಜಾಲ)
ತುಂಬಾ ಅದ್ಭುತವಾಗಿ ಮಾರ್ಮಿಕವಾಗಿ ಮೂಡಿಬಂದಿದೆ.
ReplyDeleteಚೆಂದ ಬಂದಿದೆ ಅನುಪಮಾ, ನಮ್ಮೆಲ್ಲರ ಸಿಟ್ಟನ್ನು ಪ್ರೀತಿಯ ಹನಿಯಾಗಿಸಿ ಹೊರ ಹಾಕಿದ್ದೀರಿ. ಅಭಿನಂದನೆಗಳು!
ReplyDeleteಅರ್ಥಗರ್ಭೀತ ಕವನ. ಹೇಳಲೇಬೇಕಾದ ಸತ್ಯಗಳೂ ಹೌದು...
ReplyDeleteಅಭಿನಂದನೆಗಳು ಮೇಡಂ.
ಹೇಳಲೇಬೇಕಾಗಿದ್ದುದೆಲ್ಲವೂ ಇದೆ
ReplyDeleteಸಮ ಚಿತ್ತದ ಪ್ರತಿರೋದ. Great.
ReplyDeleteಕವನ ಚೆನ್ನಾಗಿದೆ.
ReplyDeleteಪ್ರತಿಭಟನೆ ಬದಲಿಮಾರ್ಗ ಕಂಡುಕೊಳ್ಳುವುದೇ ಆಗಿರುತ್ತದೆ.ಸಂವೇದನಾಶೀಲ ಪ್ರತಿಭಟನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದೀರಿ.ಪ್ರೀತಿಯ ಅಭಿನಂದನೆಗಳು.
ReplyDeleteಅಕ್ಕ, ಪೂರ್ಣ ಕುಂಭದ ವಿರುದ್ಧ ಪ್ರತಿಭಟಿಸಿದಾಗಲೇ ನಿಮ್ಮಿಂದ ಅದೇ ವಿಷಯದ ಬಗ್ಗೆ ಯಾವುದಾದರೂ ಕವನ ಇರುತ್ತೆ ಅಂತ ನಿರೀಕ್ಷೆ ಮಾಡಿರುತ್ತಾರೆ.ಆದರೆ ಕವನದಲ್ಲಿ ಬಳಸಿರುವ ಪದಗಳನ್ನು ನಿರೀಕ್ಷೆ ಮಾಡಿರಲಿಕ್ಕೆ ಸಾಧ್ಯವೇ ಇಲ್ಲ. ಬಳಸಿರುವ ಪದಗಳು ಪೂರ್ಣ ಕುಂಭದ ವಿರುದ್ಧದ ನಿಲುವುಗಳನ್ನು ಸಮರ್ಥವಾಗಿ ತಿಳಿಸುತ್ತವೆ. ಕವನದಲ್ಲಿ ಬಳಸಿರುವ ತಂದೆ ಮತ್ತು ಖಾಲಿ ಕುಂಭಗಳ ಮೇಲೆ ಪ್ರೀತಿಯ ಚಿತ್ತಾರ ಬರೆಯುವೆವು ಎಂಬುದು ನನಗೆ ಇಷ್ಟವಾಯಿತು. ಮಂಜುಳಾ ಹೆಚ್, ಟೇಕ್ ಕೇರ್ ಅಕ್ಕ.
ReplyDeleteBeautiful , all our frustration, aspiration reflected. Most appropriate Thank you
ReplyDeleteನೀವು ಹೇಳಿದ್ದು ಸರಿ ನ್ಯಾಯವೆಂದರೆ ಎದುರಿನವರನ್ನು ಶಿಕ್ಷಿಸುವುದಲ್ಲ ಮುಂದೆ ತಪ್ಪಾಗದಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ.
ReplyDeleteನೇರವಾಗಿ ಕಲ್ಲೆಸೆದರೆ ತಪ್ಪಾದೀತು ಪ್ರತಿಭಟನೆಯಾದೀತು ರೇಶಿಮೆ ಶಾಲಿನಲ್ಲಿ ಕಲ್ಲುಕಟ್ಟಿ ಹೊಡೆಯುವುದೆ ಸೂಕ್ತ..ಗೌರವಕ್ಕೆ ರೇಶಿಮೆಶಾಲು ತಪ್ಪರಿವಾಗಲು ಕಲ್ಲು ಎರಡೂ ಸಂದಾಯವಾಗುತ್ತದೆ.. ಆದರೆ ಮೈಗೂ ಮನಸಿಗೂ ಹಚ್ಚಿಕೊಂಡ ಹರಳೆಣ್ಣೆಯ ದಪ್ಪ ಎಷ್ಟಿದೆ ಅನ್ನುವುದರಲ್ಲಿ ಇದೆ ತಪ್ಪಿನರಿವಾಗುವ ಹಾಗು ತಪ್ಪನ್ನ ಒಪ್ಪಿಕೊಳ್ಳುವ ವಿಷಯ...
ಸಮಯೋಚಿತವಾಗಿದೆ,ಸರ್ವಕಾಲಿಕವೂ ಆಗಿದೆ.
ReplyDelete